Bachelor of Business Administration

Where Future Business Leaders Begin |

9+

Acer Campus

60+

Experienced Faculty

100%

Placement Support

9k+

Alumini Network

ಕನ್ನಡ ವಿಭಾಗ

ಶಿಕ್ಷಣ ಸಂಸ್ಥೆಗೆ ಭಾಷಾ ವಿಭಾಗವು ಹೃದಯವಿದ್ದಂತೆ. ಈ ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿಗಳೊಂದಿಗೆ ಭಾಷಾ ಕೌಶಲ್ಯಗಳನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ನೈತಿಕ ಪ್ರಜ್ಞೆಯನ್ನು ಮೂಡಿಸುವ ಮಹತ್ವದ ಜವಾಬ್ದಾರಿಯನ್ನು ಕನ್ನಡ ವಿಭಾಗವು ನಿರ್ವಹಿಸುತ್ತದೆ.

ಕರ್ನಾಟಕದಲ್ಲಿ ಕನ್ನಡ ಭಾಷೆ – ಅಮ್ಮನ ಭಾಷೆಯಾಗಿ, ಅನ್ನದ ಭಾಷೆಯಾಗಿ ಬಹುಸಂಖ್ಯಾತ ಸಮುದಾಯಗಳ ವ್ಯಾವಹಾರಿಕ ಭಾಷೆಯಾಗಿ ಈ ಜವಾಬ್ದಾರಿಯ ನಿರ್ವಹಣೆಯಲ್ಲಿ ಪ್ರಥಮ ಆದ್ಯತೆಗೆ ಅರ್ಹವಾಗಿದೆ. ಈ ಅರಿವಿನೊಂದಿಗೆ ನಮ್ಮ ಮಹಾವಿದ್ಯಾಲಯದ ಕನ್ನಡ ವಿಭಾಗವು 2007 ರಿಂದಲೂ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದೆ. ದೈನಂದಿನ ಪಾಠ-ಪ್ರವಚನಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವವನ್ನು ಮೂಡಿಸಲಾಗುತ್ತಿದೆ. ವೇದಿಕೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ತೊಡಗಿಸಿ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಒದಗಿಸಲಾಗುತ್ತಿದೆ. ಪುಸ್ತಕ ಓದು, ಪ್ರಬಂಧ, ಚರ್ಚೆ, ಭಾಷಣ, ಕವಿತಾ ರಚನೆ, ರಸಪ್ರಶ್ನೆ, ಸಂಗೀತ, ನೃತ್ಯ, ನಾಟಕ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿ ಅವರಲ್ಲಿನ ಸೃಜನಶೀಲತೆ ಪ್ರಕಟಗೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಸಾಧಕರೊಂದಿಗೆ ಸಂವಾದದಂತಹ ವಿನೂತನ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಸಾಧನೆಯೆಡೆಗೆ ಪ್ರೇರೇಪಿಸುತ್ತಿದೆ. ಅನ್ಯಭಾಷಾ ವಿದ್ಯಾರ್ಥಿಗಳನ್ನು ಕನ್ನಡದ ಮುಖ್ಯ ವಾಹಿನಿಗೆ ಜೋಡಿಸಲು ‘ಕನ್ನಡ ಕಲಿ’ ಮಾದರಿಯ ಪ್ರಾಥಮಿಕ ಬೋಧನಾ ವಿಧಾನವನ್ನು ಅನುಸರಿಸಲಾಗುತ್ತದೆ. ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಮರ್ಥ ಅಧ್ಯಾಪಕರು ಇಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವುದು ವಿಶೇಷ. ಸಮಕಾಲೀನ ಜಗತ್ತಿನ ಬದಲಾವಣೆಗಳೊಂದಿಗೆ ಅತ್ಯಂತ ಕ್ರಿಯಾಶೀಲವಾಗಿ ಹೆಜ್ಜೆ ಹಾಕುತ್ತಾ ಮಹಾವಿದ್ಯಾಲಯದ ಘನತೆಯನ್ನು ಹೆಚ್ಚಿಸುವಲ್ಲಿ ಕನ್ನಡ ವಿಭಾಗದ ಪಾತ್ರ ಗಮನಾರ್ಹವಾಗಿದೆ.

ಕನ್ನಡ ಭಾಷೆಯ ಆಯ್ಕೆ ಏಕೆ?

ವಿಭಾಗದ ವಿಶೇಷತೆಗಳು:

Course Details:

HOD

Mr. Somashekharappa B K

Semesters

4

Number of Faculty

4

Contact us:

ಉದ್ಯೋಗ ಅವಕಾಶಗಳು:

Members Of The Faculty

Mr.Somashekharappa B K

Mr.Somashekharappa B K

Head of the Department
M.A., B.Ed., (Ph.D.)
Dr. Ramkumar N

Dr. Ramkumar N

Assistant Professor
M.A, M.Phil., NET, KSET, B.Ed., PGDJ Ph.D.
Dr. Raghavendra Kuppelur

Dr. Raghavendra Kuppelur

Assistant Professor
M.A., Ph.D., NET-JRF, KSET, B.Ed, TET
Dr. Amit M Kudache

Dr. Amit M Kudache

Assistant Professor
M.A., Ph.D., NET, KSET

ವಿದ್ಯಾರ್ಥಿಗಳ ಪ್ರತಿಕ್ರಿಯೆಗಳು